Monday, July 26, 2010

ಅ೦ತರಾತ್ಮ

ಮುಚ್ಚುಮರೆಯಿಲ್ಲದೆಯೆ ನಿನ್ನ ಮು೦ದೆಲ್ಲವನು
ಬಿಚ್ಚಿಡುವೆವೋ ಗುರುವೆ ಅ೦ತರಾತ್ಮ...
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೆ ಅ೦ತರಾತ್ಮ..

ರವಿಗೆ ಕಾ೦ತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೆ ಪಾಪವಾಗಿ
ಗ೦ಗೆ ತಾನೂದ್ಭ್ಹ್ವಿಪ ನಿನ್ನಡಿಯ ಸೋ೦ಕಿಗೆ
ನರಕ ತಾನುಳಿಯುವುದೆ ನರಕವಾಗಿ

ಮುಚ್ಚುಮರೆಯಿಲ್ಲದೆಯೆ ನಿನ್ನ ಮು೦ದೆಲ್ಲವನು
ಬಿಚ್ಚಿಡುವೆವೋ ಗುರುವೆ ಅ೦ತರಾತ್ಮ...

ಸಾ೦ತರೀತಿಯನೆಮ್ಮಿ ಕದಡಿರುವುದೆನ್ನಾತ್ಮ
ಸಾ೦ತ ರೀತಿಯು ಅದೆ೦ತೋ ಓ ಅನ೦ತಾ...
ನನ್ನ ನೀತಿಯ ಕುರುಡಿನಿ೦ದೆನ್ನ ರಕ್ಷಿಸೈ
ನಿನ್ನ ಪ್ರೀತಿಯ ಬೆಳಕಿನಾ ಆನ೦ದಕೊಯ್...

ಮುಚ್ಚುಮರೆಯಿಲ್ಲದೆಯೆ ನಿನ್ನ ಮು೦ದೆಲ್ಲವನು
ಬಿಚ್ಚಿಡುವೆವೋ ಗುರುವೆ ಅ೦ತರಾತ್ಮ...

-- Sung by ರಾಜು ಅನ೦ತ ಸ್ವಾಮಿ..*

Tuesday, July 20, 2010

ಗೆಳತಿ

ಗೆಳತಿ

ನಿ೦ತಿರುವೆ ಬಲು ದೂರ
ಕರಿಯುವೆ ಬಳಿಬಾರ
ಯೋಜನೆಯ ರಹದಾರಿ ಬರುವುದೆ೦ತು?

ಕಾಫಿಯ ಪರಿಮಳವು ಘಮ್ಮೆ೦ದು ಬ೦ದಿತ್ತು
ಕರೆ ಕೇಳಿ ಹೊರಟಿದ್ದೆ, ಮಳೆಯಾಗಿ ಬ೦ದಿದ್ದೆ
ಕದ ತೆರೆಯಲಿಲ್ಲ ನೀನಾಗ ನಾ ಮಾಡಲೆ೦ತು?

-- ಜಯ್

Wednesday, June 16, 2010

ದುಗುಡ...

*ನನ್ನೊಳಗಿನ ದುಗುಡ ಕ೦ಡೆ ಎಲ್ಲರಲಿ
ಕಹಿ ಇತ್ತು ಭಯವಿತ್ತು ಅಸಹನೆಯು ಬೆರೆತಿತ್ತು
ನೊವಿತ್ತು ಮನದ ಅ೦ತರಾಳದಲಿ.......

ದುಗುಡತೆಯ ಹೊರ ದೂಡಿ
ಮನವನ್ನು ಸರಿ ಮಾಡಿ
ಕನಸಿನ ಸೆಲೆ ಮೂಡಿ
ಛಲವದುವೆ ಬೆಳೆದಿತ್ತು ಎಲ್ಲರಲು ಮನೆ ಮಾಡಿ.............

ಅದ ಕ೦ಡು ನಾನಿ೦ದು ನಡೆದಿಹೆನು ಮು೦ದೆ
ಕವಿಗಳ ಸಲಹೆ ನುಗ್ಗಿ ನಡೆ ಮು೦ದೆ...*

Tuesday, March 16, 2010

ನಿನ್ನ ನೆನಪಿನಲ್ಲಿ.....

*ಒಂದೊಮ್ಮೆ ನಾನು ಸತ್ತರೆ,

ನನ್ನನ್ನು ಸುಡುವ ಮೊದಲು,

ನನ್ನ ಹೃದಯವನ್ನು ಕ್ಷೇಮವಾಗಿ ತೆಗೆದುಕೋ.

ನಾನು ನನ್ನ ಹೃದಯದ ಬಗ್ಗೆ ಯೋಚಿಸುತ್ತಿಲ್ಲ,

ಆ ಹೃದಯದೊಳಗಿರುವ ನಿನ್ನ ಬಗ್ಗೆಯೇ ಯೋಚಿಸುತ್ತಿದ್ದೇನೆ.

ನಿನ್ನ ಹೃದಯದಲ್ಲಿ ಯಾರೋ ಇರಬಹುದು,

ನಿನ್ನ ಕನಸಿನಲ್ಲಿ ಯಾರೋ ಇರಬಹುದು,

ನಿನ್ನ ಬದುಕಿನಲ್ಲಿಯಾರೋ ಇರಬಹುದು,

ಆದರೆ . .ನಿನ್ನ ನೆನಪಿನಲ್ಲಿ ಯಾರೂ ಇಲ್ಲದೇ ಇದ್ದಾಗ ನಾನಿರುತ್ತೇನೆ...*

Tuesday, December 29, 2009


ಕನಸು
ನಿದಿರೆಯ ಪರೆ ಸರಿಸಿ, ಚಿಲುಮೆಯ ಜಲ ಹರಿಸಿ
ಎದೆ ಸೆಟೆಸಿ, ಮನ ಬಿಡಿಸಿ
ತ೦ಪೆರೆದ ಕನಸು
ಚಡಪಡಿಸಿ, ಗಡಬಡಿಸಿ
ಸಮಯವದು ಬಡಿದೆಬಿಸಿ ಎಬ್ಬಿಸಿತು
ಕ್ರೂರತೆಯ ನನಸು.

---jay..

Monday, December 28, 2009

ಹೊಸ ವರ್ಷದ ಹಾರ್ದಿಕ ಶುಭಾಷಯಗಳು...."ಸಿರಿಗನ್ನಡ೦ ಗೆಲ್ಗೆ; ಸಿರಿಗನ್ನಡ೦ ಬಾಳ್ಗೆ"

ಎಲ್ಲರಿಗು ನಮಸ್ಕಾರ....

ಹೊಸ ವರ್ಷ ಎಲ್ಲರಿಗು ಸ೦ತೋಷ ತರಲಿ ಎ೦ದು ಹಾರೈಸುತೇನೆ. "ಸಿರಿಗನ್ನಡ೦ ಗೆಲ್ಗೆ; ಸಿರಿಗನ್ನಡ೦ ಬಾಳ್ಗೆ"

ನಿಮ್ಮವ,
ಜಯ್....

The Journey begins now....

Hi Raji,
Finally i started writing by your influence... Hope it takes me to the truthful part of my life. Now the time here is 1.40 PM in Grand Rapids... I wanted to write few of my thinkings into a blog so that i can store for my memories.

Jay