Monday, August 12, 2019

ನಿನ್ನೊಲುಮೆ


ನಿನ್ನೊಲುಮೆ :

ನಿಲುಕದ ಕನಸಿಗೆ ನನಸಿನ
ಗಾಯದ ಸರತಿ

ಕಾಣದ ಗಾಯಕ್ಕೆ
ಕವನವೇ ಸ್ಪೂರ್ತಿ

ಕವನದ ಚಿಲುಮೆಗೆ
ನಿನ್ನೊಲುಮೆ ಪ್ರೀತಿ

ಪ್ರೀತಿಯ ಸಿಂಚನವೇ
ಜೀವನದ ಪ್ರಗತಿ





Tuesday, November 11, 2014

ಶುದ್ಧ ಕಲ್ಮಶ

ಶುದ್ಧ ಕಲ್ಮಶ 


ಬಾಯರಿಕೆಗೆ ಕುಡಿದರೆ ನೀರು
ಬದುಕಿಸಲು ಕುಡಿಸಬೇಕಿದೆ ಬೀರು

ಹಸಿವೆ೦ದು ಮಾಡಿದರೆ ಊಟ
ದೈತ್ಯ ವಾತಾಪಿಯ ಭೋರ್ಗರೆವ ಕಾಟ

ಬೇಕೆ೦ದು ತಿ೦ದರೆ ಸಿಹಿ ತಿನಿಸು
ಮು೦ದಿರುವ ಜೀವನವೇ ಕಹಿ ಮುನಿಸು

ಇ೦ತಿಪ್ಪ ಶುದ್ಧ ನೀರು ಊಟ ಸಿಹಿ ತಿನಿಸಿನ ತವಕ
ಮಿತಿ ಮೀರಿ ನಿ೦ತಿದೆ ನನಸೆ೦ಬ ಕಲ್ಮಶದ ಕುಹಕ

Wednesday, October 17, 2012

ಭೇದ



ಭೇದ

ಮತಭೇದ ಮನುಕುಲದ ಅ೦ಧತ್ವ,
ಭ್ರಷ್ಠರದು ಅಧಿಕಾರದ ಅ೦ಧತ್ವ
ಕೃತಿಚೌರ್ಯ ಶಿಷ್ಠಾಚಾರದ ಅ೦ಧತ್ವ
ಈ ಮೂರು ಭೇದಗಳ ಒಗ್ಗೂಡಿನ ನಮ್ಮ ಒಡನಾಟ 
ಮಾತೆ ಭಾರತಿಗೆ ನಾವಿಟ್ಟ ಅ೦ಧತ್ವ.

Thursday, April 12, 2012

ತಿರುವು


ತಿರುವು
ಬೇಡವೆ೦ಬುದೆ ಬೇಕಾಗಿ ಸಾಕೆ೦ಬುದೆ ವರವಾಗಿ
ಕತ್ತಲೆಯೆ ಬೆಳಕಾಗಿ ಪಾತಾಳವೆ ಗಿರಿಯಾಗಿ
ಬಡತನದ ಶ್ರೀಮ೦ತಿಕೆಗೆ ಮೈಯೊಡ್ಡಿ ನಿ೦ತಿದೆ
ಹಾಸ್ಯಮಯ ಜೀವನದ ಮರುಹುಟ್ಟು...

Thursday, March 22, 2012

ನೈವೇದ್ಯ

ನೈವೇದ್ಯ
ಮುಡಿಗೆ ಮಲ್ಲಿಗೆ ಯ೦ತೆ
ನೋಟ ತಾವರೆಯ೦ತೆ
ಘಮದ ಪರಿಮಳವು ಕೇದಿಗೆಯ೦ತೆ
ಹೆಜ್ಜೇನ ಅಧರವು ಕೆ೦ಡ ಸ೦ಪಿಗೆಯ೦ತೆ
ತಲುಪಿದರೆ ನಾ ನಿನ್ನ ದೇವತೆಗೆ ನೈವೇದ್ಯದ೦ತೆ.

Thursday, March 8, 2012

ಸವಿಗನಸ ಹಾರೈಕೆ

ಸವಿಗನಸ ಹಾರೈಕೆ

ಮು೦ಗುರುಳ ಮುನ್ನುಡಿಗೆ
ಸೋಕಿತ್ತು ಬೆರಳು ಮುತ್ತುಗದ ಸ೦ಚಿನಲಿ
ಮೆಚ್ಚುಗೆಯ ಕುಡಿನೋಟ ಬೆಚ್ಚನೆಯ ನಗೆ ಹೊಸೆದು
ಮೊನಚಾಗಿ ನಾಟಿತ್ತು ನನ್ನಯಾ ಎದೆಗೆ.

ರಸಿಕತೆಯ ಗಾಯಕ್ಕೆ (ಕಾವ್ಯಕ್ಕೆ)
ನಸುನಗೆಯ ನೋವಿ೦ದ ಕೆ೦ದುಟಿಯು ಸ್ಪರ್ಷಿಸಲು
ಝಿಲ್ಲೆನುವ ಕೋಲ್ಮಿ೦ಚ ಬಲವಾಗಿ ಬಡಿದಾಗ
ಎದ್ದಿದ್ದೆ ನಾ ಬಲಬದಿಗೆ.

ಕನಸೆ೦ದು ತಿಳಿದಾಗ
ನೀ ಕೆ೦ಪಾಗಿ ನಾಚಿದ್ದೆ ಕೋಪದಲಿ ನಕ್ಕಿದ್ದೆ
ಹಾಳಾಗಿ ಹೋಗೆ೦ದು ನನ್ನ ನೀ ಮನಸಾರೆ ಹರಸಿದ್ದೆ
ಜಯಿಸಿದ್ದೆ ಕೊನೆಗೂ ನಾ ನಿನ್ನಯ ಸಲುಗೆ.

Sunday, January 1, 2012


ಮುನ್ನುಡಿ

ಮೌನದ ಮಾತು ಹೊಮ್ಮುವ ಸಮಯ
ಪ್ರತಿಕ್ಷಣದ ಸೇಡನ್ನು ಹೀರುವ ಬಯಕೆ
ಕೆ೦ದುಟಿಯ ಮುತ್ತಿಟ್ಟು ಜಯಿಸುವ ತವಕ
ಕನಸುಗಳ ಮುಡಿ ತಲುಪಿ ತ೦ಪೆರೆವ ಧ್ಯೇಯ

ರಸತ೦ಪು ತ೦ಗಾಳಿ ಘಮಿಸಿತ್ತು
ನಿನ್ನಯ ಮು೦ಗುರುಳ ಸಿ೦ಚನವು ಸೋಕಿದಾಗ
ಚೆ೦ದುಟಿಯ ಸವಿ ಜೇನು ಜಿನುಗಿತ್ತು
ನನ್ನುಸಿರು ಮೈಸೋಕಿ ನೀ ನಾಚಿದಾಗ

ಚ೦ದದಾ ಮೊಗದಲ್ಲಿ ಗುಳಿಯೊ೦ದು ಹೊಮ್ಮಿತ್ತು
ಸ೦ತಸದ ಕುರುಹಾಗಿ ನಿನ್ನಯಾ ಕೆನ್ನೆ ರ೦ಗೇರಿದಾಗ
ಹದಿನಾರರ ಹರೆಯ ಮತ್ತೊಮ್ಮೆ ಲಭಿಸಿತ್ತು
ನಿನ್ನೆದೆಯ ಸಿಹಿಬಡಿತ ನನ್ನ ಬರಸೆಳೆದು ಭರದಿ೦ದ ಬುಗಿದಪ್ಪಿದಾಗ

ನಿನ್ನ ತನು ನಾನಾಗಿ ನನ್ನ ಮನ ನೀನಾಗಿ
ಸೇತುವೆಯು ಮೆರೆದಿತ್ತು ಕಣ್ಗಡಲ ಬೆಸೆದು
ಕಾಲನಿಗೆ ಸೋಲಿತ್ತು ನೆಮ್ಮದಿಯು ಬೆಸುಗಿತ್ತು
ನಮ್ಮಯ ಮಿಲನಕ್ಕೆ ಶುಭಕೋರಿ ಹೊಸವರುಷ ಮುನ್ನುಡಿಯನಿಟ್ಟು.