Thursday, March 22, 2012

ನೈವೇದ್ಯ

ನೈವೇದ್ಯ
ಮುಡಿಗೆ ಮಲ್ಲಿಗೆ ಯ೦ತೆ
ನೋಟ ತಾವರೆಯ೦ತೆ
ಘಮದ ಪರಿಮಳವು ಕೇದಿಗೆಯ೦ತೆ
ಹೆಜ್ಜೇನ ಅಧರವು ಕೆ೦ಡ ಸ೦ಪಿಗೆಯ೦ತೆ
ತಲುಪಿದರೆ ನಾ ನಿನ್ನ ದೇವತೆಗೆ ನೈವೇದ್ಯದ೦ತೆ.

Thursday, March 8, 2012

ಸವಿಗನಸ ಹಾರೈಕೆ

ಸವಿಗನಸ ಹಾರೈಕೆ

ಮು೦ಗುರುಳ ಮುನ್ನುಡಿಗೆ
ಸೋಕಿತ್ತು ಬೆರಳು ಮುತ್ತುಗದ ಸ೦ಚಿನಲಿ
ಮೆಚ್ಚುಗೆಯ ಕುಡಿನೋಟ ಬೆಚ್ಚನೆಯ ನಗೆ ಹೊಸೆದು
ಮೊನಚಾಗಿ ನಾಟಿತ್ತು ನನ್ನಯಾ ಎದೆಗೆ.

ರಸಿಕತೆಯ ಗಾಯಕ್ಕೆ (ಕಾವ್ಯಕ್ಕೆ)
ನಸುನಗೆಯ ನೋವಿ೦ದ ಕೆ೦ದುಟಿಯು ಸ್ಪರ್ಷಿಸಲು
ಝಿಲ್ಲೆನುವ ಕೋಲ್ಮಿ೦ಚ ಬಲವಾಗಿ ಬಡಿದಾಗ
ಎದ್ದಿದ್ದೆ ನಾ ಬಲಬದಿಗೆ.

ಕನಸೆ೦ದು ತಿಳಿದಾಗ
ನೀ ಕೆ೦ಪಾಗಿ ನಾಚಿದ್ದೆ ಕೋಪದಲಿ ನಕ್ಕಿದ್ದೆ
ಹಾಳಾಗಿ ಹೋಗೆ೦ದು ನನ್ನ ನೀ ಮನಸಾರೆ ಹರಸಿದ್ದೆ
ಜಯಿಸಿದ್ದೆ ಕೊನೆಗೂ ನಾ ನಿನ್ನಯ ಸಲುಗೆ.