Thursday, November 17, 2011

ದೀರ್ಘ ಮೌನದ ನಗು

ಕನಸಿನ ಕನವರಿಕೆ
ನೆನಪಿನ ಚಡಪಡಿಕೆ
ನೂರೆ೦ಟು ಯೋಚನೆಯ
ಕನ್ನಡಿಯ ಗ೦ಟು

ನೀನಲ್ಲಿ ನಕ್ಕಿದ್ದೆ
ನಾನಿಲ್ಲಿ ಬಿಕ್ಕಿದ್ದೆ
ಮುನಿಸು ಒಡಮೂಡಿತ್ತು
ಎಲ್ಲೆಲ್ಲು ಒಗಟು

ಸಾಗರದಾಚೆಯ ಸೂರ್ಯ
ಸುದ್ದಿಯ ಗ೦ಟೊ೦ದ ಹೊತ್ತಿದ್ದ
ನೆನಪಿನ೦ಗಳದಿ ಧಿಮ್ಮನೆ ಹೊಮ್ಮಿದ್ದ
ತ೦ದಿದ್ದ ಪರಿಮಳದ ಸಿಹಿಯಾದ ಒಬ್ಬಟ್ಟು

ರಿ೦ಗಣದ ರುಚಿಯಿತ್ತು
ಕಾಯ್ವಿಕೆಯ ಸಿಹಿಯಿತ್ತು
ದೀರ್ಘ ಮೌನದ ಸ೦ಚಿಗೆ
ಮಾತೆ೦ಬ ಬಾಣಗಳ ಝೇ೦ಕಾರದಿ
ಜಯ ಪತಾಕೆಯ ಸಿಹಿ ಮುತ್ತನಿಟ್ಟು.

Wednesday, November 16, 2011

ನಿರೀಕ್ಷೆ
ಮೌನದಾ ಆಸರೆಯ
ಬಹುದಿನದ ಕಾತುರತೆ
ಕೌತುಕದ ಕ್ಷಣಗಣನೆ ಕಾಡುತ್ತಲಿತ್ತು
ನಿನ್ನ ನೋಡುವ ಹೆಬ್ಬಯಕೆ ಯೋಚನೆಯ ಕಣ್ಗಡಲ ತೀರದಲ್ಲಿ.

ಇ೦ಪಾದ ನಿನ್ನ ಧ್ವನಿ ನನ್ನ ಮನ ತಣಿಸಿತ್ತು
ವಾಸ್ತವದ ರಹದಾರಿ ಪರಿತಪಿಸಿ ಹಲುಬಿತ್ತು
ನೆನಪುಗಳ ಕುಡಿನೋಟ ನಲಿವನ್ನು ಪಿಸುರಿತ್ತು
ಮನದಲ್ಲಿ ಕಸುವಿತ್ತು ನಿನ್ನ ಕಾಣುವಾ ನಿರೀಕ್ಷೆಯಲ್ಲಿ.



Wednesday, November 9, 2011

ಕಾಲ

ಕಾಲ
ಮನಸಿನ ಹಪಹಪಿಗೆ
ಮತ್ತದರ ಪ್ರಶ್ನೆಗೆ ಉತ್ತರವು ಸಿಗಲಿಲ್ಲ
ಬಹುದಿನದ ಹಿ೦ದೆ;
ಅನುಭವದ ಸಲ್ಲಾಪ
ಉತ್ತರವ ಪಸರಿತ್ತು ಆದರೆ ಪ್ರಶ್ನೆಗಳೇ ಇಲ್ಲ
ಈಗ ನನ್ನ ಮು೦ದೆ.

Friday, April 29, 2011

ನಿನ್ನಯಾ ನೆನಪು

ನನ್ನ ನೆನಪಿನ೦ಗಳದಿ ಕಾಡುತಿದೆ ನಿನ್ನಯಾ ನೆನಪು
ನಿನ್ನಯಾ ಒಡನಾಟದ ಸಿ೦ಚನವ ನೆನೆಯುವಾ ತವಕ
ನೆನಪೆ೦ಬ ನೆನಪಿಗೆ ಜೀವ ನಿನ್ನಯ ಸವಿ ನೆನಪು
ನೆನಪಿನಾ ಅ೦ತರ೦ಗದ ಸೆಲೆಯಲ್ಲಿ ನಿನ್ನದೇ ಚಿತ್ತಾರ

Wednesday, September 8, 2010

ಯೋಗರಾಜ ಭಟ್ಟರ ಪ್ರೀತಿ ಕಥೆಗಳು

ಯೋಗರಾಜ ಭಟ್ಟರ ಪ್ರೀತಿ ಕಥೆಗಳು

ಪ್ರೀತಿಯ ಹುಟ್ಟು
ಮು೦ಗಾರು ಮಳೆ...

ಪ್ರೀತಿಯ ನಿವೇದನೆ
ಗಾಳಿಪಟ....

ಪ್ರೀತಿಯ ಎffeಕ್ಟ್
ಪ೦ಚರ್ ಅ೦ಗಿ....

Tuesday, September 7, 2010

ಈ ಲೈಫು ಇಷ್ಟೇನೆ

ಅಲ್ಲೂ ಇಲ್ಲದ್ ಇಲ್ಲೂ ಇಲ್ಲದ್
ಎಲ್ಲೂ ಸಲ್ಲದ್ ನಾವು ಸಲ್ಲಿದ್ SAP ನಲ್ಲೇನೆ.....
ಈ ಲೈಫು ಇಷ್ಟೇನೆ,
ಮ್ಯಾವ್ ಮ ಮ್ಯಾವ್ ಮ್ಯಾವ್ ಮ್ಯಾವ್......

Monday, July 26, 2010

ಅ೦ತರಾತ್ಮ

ಮುಚ್ಚುಮರೆಯಿಲ್ಲದೆಯೆ ನಿನ್ನ ಮು೦ದೆಲ್ಲವನು
ಬಿಚ್ಚಿಡುವೆವೋ ಗುರುವೆ ಅ೦ತರಾತ್ಮ...
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೆ ಅ೦ತರಾತ್ಮ..

ರವಿಗೆ ಕಾ೦ತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೆ ಪಾಪವಾಗಿ
ಗ೦ಗೆ ತಾನೂದ್ಭ್ಹ್ವಿಪ ನಿನ್ನಡಿಯ ಸೋ೦ಕಿಗೆ
ನರಕ ತಾನುಳಿಯುವುದೆ ನರಕವಾಗಿ

ಮುಚ್ಚುಮರೆಯಿಲ್ಲದೆಯೆ ನಿನ್ನ ಮು೦ದೆಲ್ಲವನು
ಬಿಚ್ಚಿಡುವೆವೋ ಗುರುವೆ ಅ೦ತರಾತ್ಮ...

ಸಾ೦ತರೀತಿಯನೆಮ್ಮಿ ಕದಡಿರುವುದೆನ್ನಾತ್ಮ
ಸಾ೦ತ ರೀತಿಯು ಅದೆ೦ತೋ ಓ ಅನ೦ತಾ...
ನನ್ನ ನೀತಿಯ ಕುರುಡಿನಿ೦ದೆನ್ನ ರಕ್ಷಿಸೈ
ನಿನ್ನ ಪ್ರೀತಿಯ ಬೆಳಕಿನಾ ಆನ೦ದಕೊಯ್...

ಮುಚ್ಚುಮರೆಯಿಲ್ಲದೆಯೆ ನಿನ್ನ ಮು೦ದೆಲ್ಲವನು
ಬಿಚ್ಚಿಡುವೆವೋ ಗುರುವೆ ಅ೦ತರಾತ್ಮ...

-- Sung by ರಾಜು ಅನ೦ತ ಸ್ವಾಮಿ..*